Daughter property Share

Querist :
Anonymous
(Querist) 27 May 2011
This query is : Resolved
ಗೆ,
ಮಾನ್ಯ ವಕೀಲ ಸಾಹೇಬರು
ನಮ್ಮ ತಂದೆಯವರಿಗೆ ಸುಮಾರು ಹತ್ತು ಎಕರೆ ನಮ್ಮ ತಾತನವರ ಮತ್ತು ಅವರ ಸ್ವಂತ ಸಂಪಾದನೆಯ ಆಸ್ತಿಯಿದ್ದು, ನಮ್ಮ ತಂದೆಯವರಿಗೆ ನಾವು ಮೂರು ಜನ ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗ ನಿರುತ್ತಾನೆ.ನಾವು ಮೂರು ಜನ ಹೆಣ್ಣು ಮಕ್ಕಳಿಗೆ ವಿವಾಹ ವಾಗಿದ್ದು, ಮೊದಲನೆಯ ಹೆಣ್ಣು ಮಗಳಿಗೆ 1985 ರಲ್ಲಿ ವಿವಾಹವಾಗಿರುತ್ತದೆ, ಎರಡನೆಯ ಹೆಣ್ಣುಮಗಳಾದ ನನಗೆ ವಿಧ್ಯಾಭ್ಯಾಸ ಮಾಡುತ್ತಿದ್ದುದ್ದರಿಂದ 1998 ರಲ್ಲಿ ವಿವಾಹವಾಗಿರುತ್ತದೆ, ಮೂರನೆಯರು ಗಂಡುಮಗನಾಗಿರುತ್ತಾನೆ, ನಾಲ್ಕನೆಯ ಹೆಣ್ಣು ಮಗಳಿಗೆ 1993ರಲ್ಲಿ ವಿವಾಹ ವಾಗಿರುತ್ತದೆ,ನಮ್ಮ ತಂದೆಯವರು 2004 ನೇ ಇಸವಿಯಲ್ಲಿ ನಮಗೆ ತಿಳಿಯದ ಹಾಗೆ ಪೂರ್ಣ ಆಸ್ತಿಯನ್ನು ಗಂಡು ಮಗನಿಗೆ ರಿಜಿಸ್ಟರ್ ಮಾಡಿಕೊಟ್ಟಿರುತ್ತಾರೆ,ಇದರಿಂದ ನಾವು ಮೂರುಜನ ಮನನೊಂದು ನಮ್ಮ ಪಾಲಿನ ಭಾಗ ಪಡೆಯಲು ನ್ಯಾಯಾಲಯದಲ್ಲಿ ಧಾವೆ ಹೂಡಲು ನಿರ್ಧರಿಸಿದ್ದು, ಇದರಲ್ಲಿ ನಮಗೆ ಜಯ ಸಿಗಲಿದೆಯೆ, ಮತ್ತು ನಾವು ಕರ್ನಾಟಕ ರಾಜ್ಯ ದವರಾಗಿದ್ದು, ಕರ್ನಾಟಕ ರಾಜ್ಯದ ಕಾನೂನಿನ ಪ್ರಕಾರ ಯಾರಿಗೆ ಎಸ್ಟು ಭಾಗ ದೊರೆಯಲಿದೆ ದಯವಿಟ್ತು ತಿಳಿಸಿ, ಹಾಗು ಎರಡನೆಯ ಹೆಣ್ಣು ಮಗಳಾದ ನಾನು 1998 ರಲ್ಲಿ ಆಗಿರುವ ವಿವಾಹ ಅಂತರ್ ಜಾತಿ ವಿವಾಹ ವಾಗಿದ್ದು ಇದರಿಂದ ನನ್ನ ಪಾಲಿನ ಆಸ್ತಿ ಪಡೆಯಲು ತೊಡಕೇನಾದರು ಇದೆಯೇ, ಹಾಗೇನಾದರೂ ತೊಡಕಿದ್ದರೆ ಅದಕ್ಕೆ ಪರಿಹಾರವನ್ನು ತಾವು ದಯವಿಟ್ಟು ತಿಳಿಸಬೇಕಾಗಿ ಈ ಮೂಲಕ ವಿನಂತಿ ಮಾಡುತ್ತೆನೆ.
ನಿಮ್ಮ ಅತ್ಯುತ್ತಮ ಸಲಹೆ ನಿರೀಕ್ಷೆಯಲ್ಲಿ ನಾನಿದ್ದೇನೆ.
ವಂದನೆಗಳು.
If u r not ready answer in kannada, pls answer in english only.
R.Ramachandran
(Expert) 27 May 2011
If you are not able to read my answer below, please be rest assured that NOBODY in the world can read my answer.

Querist :
Anonymous
(Querist) 27 May 2011
ಮಾನ್ಯರೇ,
ನಮ್ಮ ತಂದೆಯವರು ಎರಡು ಸಾವಿರದ ಆರು - ಏಳರಲ್ಲಿ ಮರಣಹೊಂದಿರುತ್ತಾರೆ.ತಾವು ದಯವಿಟ್ಟು ನಿಮ್ಮ ಸಲಹೆಗಾಗಿ ಇದನ್ನು ಪರಿಗಣಿಸಬೇಕಾಗಿ ವಿನಂತಿ ಮಾಡುತ್ತೇನೆ.
adv. rajeev ( rajoo )
(Expert) 27 May 2011
I am also from Karnataka, but I could find how to type in kannada to answer it in kannada.
Your father had got right to dispose of his self acquired property by his will and wish, but he cannot do so in case of ancestral property. Your father is died in the year 2006-07, so you have got equal share in the ancestral properties being a co-parcener. Date of death is important not date of birth of a female. After amendment to sec 8 of Hindu succession act female is a co-parcener she is entittled to equal share with the males

Querist :
Anonymous
(Querist) 28 May 2011
ರಾಜು ನಾರ್ ರವರಿಗೆ ನನ್ನ ಬೆಳಗಿನ ನಮಸ್ಕಾರಗಳು,
ಮಾನ್ಯರೇ,
ನನ್ನ ಪ್ರಶ್ನೆಗೆ ನಿಮ್ಮಂದ ಪ್ರತಿಕ್ರಿಯೆ ಬಂದಿರುವುದಕ್ಕೆ ನಿಮಗೆ ನನ್ನ ಅನಂತ ನಮಸ್ಕಾರಗಳು,ನಿಮ್ಮಂದ ಕೆಲವು ವಿಷಯಗಳನ್ನು ತಿಳಿಯಲು ಬಯಸುತ್ತೆನೆ.
1)ನಮ್ಮ ತಂದೆಯವರು ತಮ್ಮ ಪುತ್ರನ ಹೆಸರಿಗೆ ಆಸ್ತಿಯನ್ನು ರಿಜಿಸ್ಟರ್ ಮಾಡಿರುವುದಕ್ಕೆ ನಿಮ್ಮ ಪ್ರತಿಕ್ರಿಯೆ ದಯವಿಟ್ಟು ತಿಳಿಸಿ.
2)ನಾನು ಒಬ್ಬರು ವಕೀಲರನ್ನು ಆಸ್ತಿಯಲ್ಲಿ ಭಾಗದ ಬಗ್ಗೆ ವಿಚಾರಣೆ ಮಾಡಿದಾಗ ಅವರು ಕರ್ನಾಟಕದ ಕಾನೂನಿನ ಪ್ರಕಾರ 1994 ರಿಂದ ಈಚೆಗೆ ಮದುವೆಯಾದ ಹೆಣ್ಣು ಮಕ್ಕಳಿಗೆ ಆಸ್ತಿಯಲ್ಲಿ ಸಮಪಾಲು ದೊರೆಯುತ್ತದೆ ಎಂದು ತಿಳಿಸಿರುತ್ತಾರೆ, ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ದಯವಿಟ್ಟು ತಿಳಿಸಿ.
3)ಮತ್ತು ನಮ್ಮ ತಂದೆಯ ಸ್ವಂತ ಸಂಪಾದನೆಯ ಆಸ್ತಿಯಲ್ಲಿ ನಮಗೆ ಪಾಲು ದೊರೆಯುವ ಯಾವುದೇ ಅವಕಾಶವಿಲ್ಲವೆ ದಯವಿಟ್ಟು ತಿಳಿಸಿ.
4)ಹಾಗು ಒಟ್ಟು ಆಸ್ತಿಯಲ್ಲಿ ನನ್ನ ಭಾಗ ಯಾವರೀತಿಯಿರುತ್ತದೆ ದಯವಿಟ್ಟು ತಿಳಿಸಿ.
5)ಮತ್ತು ವಕೀಲರನ್ನು ವಿಚಾರಣೆ ಮಾಡಿದಾಗ ಅವರು 1994 ಆಕ್ಟ್ ಪ್ರಕಾರ ನಿಮಗೆ ಸಮಪಾಲು ದೊರೆಯುತ್ತದೆ ಎಂದು ತಿಳಿಸಿದರು,ದಯವಿಟ್ಟು 1994 ರ ಆಕ್ಟ್ ಬಗ್ಗೆ ದಯವಿಟ್ಟು ತಿಳಿಸಿ.
ಸೂಕ್ತಸಲಹೆಯ ನಿರೀಕ್ಷೆಯಲ್ಲಿರುವ
ನಿಮ್ಮವಿಸ್ವಾಸಿ

Querist :
Anonymous
(Querist) 28 May 2011
Dear Rajoo sir
ಪಿತ್ರಾರ್ಜಿತ ಆಸ್ತಿ ಮತ್ತು ಸ್ವಯಾರ್ಜಿತ ಆಸ್ತಿ ಎಂದರೇನು ದಯವಿಟ್ಟು ತಿಳಿಸಿ.
ಕಾರಣವಿಷ್ಟೆ ನಮ್ಮ ತಂದೆಯವರ ಹೆಸರಿನಲ್ಲಿರುವ ಸಂಪೂರ್ಣ ಆಸ್ತಿ ನಮ್ಮ ತಾತ ಸತ್ತ ನಂತರ ಇವರ ಹೆಸರಿಗೆ ವರ್ಗಾವಣೆ ಯಾಗಿದ್ದು.ನಮ್ಮ ತಂದೆ ತಾವೇ ಸ್ವತಹಃ ಬೇರೆಯವರಿಂದ ಕೊಂಡು ರಿಜಿಸ್ಟರ್ ಮಾಡಿಕೊಂಡಿರುವುದಕ್ಕೆ ಯಾವುದೇ ರೀತಿಯ ರಿಜಿಸ್ಟರ್ ಪತ್ರಗಳು ಇವರ ಬಳಿಯಿರಲಿಲ್ಲ. ನಮ್ಮ ತಂದೆಯವರು ಸಂಪೂರ್ಣ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿದ ನಂತರವೇ ನಮ್ಮ ಚಿಕ್ಕಪ್ಪಂದರಿಗೆ ಭಾಗ ಕೊಟ್ಟಿರುತ್ತಾರೆ.ನನ್ನ ಉಹೆಯ ಪ್ರಕಾರ ಇವರ ಸ್ವಯಾರ್ಜಿತ ಆಸ್ತಿಯಾಗಿದ್ದರೆ ಇವರು ನಮ್ಮ ಚಿಕ್ಕಪ್ಪಂದಿರಿಗೆ ಭಾಗ ಕೊಡುತ್ತಿರಲಿಲ್ಲ.ತಾವು ದಯವಿಟ್ಟು ಈ ಬಗ್ಗೆ ವಿವರವಾಗಿ ತಿಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.
ವಂದನೆಗಳು.